ಓಂ! ಶ್ರೀ ಗೋಸಲ ಚನ್ನಬಸವೇಶ್ವರ, ಗುರುಭ್ಯೋ ನಮಃ –
ಚಿತ್ತ ಗುರುವಮ್! ಚಿತ್ತ ಗುರುವಮ್!
ಹೇಳೋಣ ಗೋಸಲ ಗುರು ಓಂ, ಓಂ, ಓಂ!–
ಮುಕ್ತಿಯ ಕಡೆಗೆ ಇರಲಿ ನಿನ್ನ ಚಿತ್ತ–
ಸಂಪೂರ್ಣ ಗುರು–ಭಕ್ತಿ–ಚಿತ್ತ!
ಗುರುಬಲ
ಬಿಟ್ಟು ಬಿಡು ಹಣದ ಹಂಬಲ,
ಎಲ್ಲಾ ನೀನೆ ಅಂದರೆ ಗುರುಬಲ!
ಗುಬ್ಬಿಯಪ್ಪನಿಗೆ ಕೊಡು ಭಕ್ತಿ ನಿರ್ಮಲ,
ಅರಿವೇ ಗುರು, ಕಾಯಕವೇ ಛಲ –
ಚಿತ್ತ ಗುರುವಮ್! ಚಿತ್ತ ಗುರುವಮ್!
ಹೇಳೋಣ ಗೋಸಲ ಗುರು ಓಂ, ಓಂ, ಓಂ!–
ಸಂಪೂರ್ಣ ಚಿತ್ತ ಗೋಸಲ ಗುರುವಿನತ್ತ!
ಆತ್ಮ ಸತ್ಯ
ನನ್ನದು ನಿನ್ನದು ಎಲ್ಲಾ ಸುಳ್ಳು,
ಆತ್ಮ ಶಾಶ್ವತ, ಅದೊಂದೇ ಸತ್ಯ –
ಕರಗಲಿ ಮನಸಿನ ವಿಷ ಗುರು ಹತ್ರ,
ಗೋಸಲ ಗುರುವರ್ಯ ನಿತ್ಯ ಸತ್ಯ.
ಚಿತ್ತ ಗುರುವಮ್! ಚಿತ್ತ ಗುರುವಮ್!
ಹೇಳೋಣ ಗೋಸಲ ಗುರು ಓಂ, ಓಂ, ಓಂ!–
ಸಂಪೂರ್ಣ ಚಿತ್ತ ಗೋಸಲ ಗುರುವಿನತ್ತ!
ಮನಸ್ಸಿನ ಸಾಕ್ಷಿ
ದೇಹ, ಕುಟುಂಬ, ಸಾಧನೆ ಎಲ್ಲಾ ಮುಳ್ಳು,
ಇರಬೇಕಿರೋದು ಮನಸ್ಸಿನ ಸಾಕ್ಷಿ,
ಸಾರ್ಥಕ ಬದುಕು ಬಾಳು, ಕೇಳು! –
ಗೋಸಲ ಚನ್ನಬಸವೇಶ್ವರ ಜಪ ಮಾಡು.
ಗೋಸಲ ಚನ್ನಬಸವೇಶ್ವರ
ಗೋಸಲ ಚನ್ನಬಸವೇಶ್ವರ
ಗೋಸಲ ಗುರು ಚನ್ನಬಸವೇಶ್ವರ
ಗುರು ಜಪತರಂಗ, ಗುರು ಜಪತರಂಗ!
ಚಿತ್ತ ಗುರುವಮ್! ಚಿತ್ತ ಗುರುವಮ್!
ಹೇಳೋಣ ಗೋಸಲ ಗುರು ಓಂ, ಓಂ, ಓಂ!–
ಸಂಪೂರ್ಣ ಚಿತ್ತ ಗೋಸಲ ಗುರುವಿನತ್ತ!
ಓಂ! ಶ್ರೀ ಗೋಸಲ ಚನ್ನಬಸವೇಶ್ವರ, ಗುರುಭ್ಯೋ ನಮಃ
ಸಂಗೀತ ವಿವರಗಳು
ಗೀತರಚನೆ
🖊 ವಿಶ್ವಾಸ ತುಮಕೂರ ಚನ್ನಬಸಪ್ಪ
ಗುರುತ್ವ
ವೀರಶೈವ ಲಿಂಗಾಯತ ಜಂಗಮ ಶರಣ ಸಾಹಿತಿ ಮತ್ತು ಕನ್ನಡ ಸಾಹಿತಿ
ಸಂಗೀತ ಸಂಯೋಜನೆ, ನಿರ್ದೇಶನ ಮತ್ತು ವ್ಯವಸ್ಥೆ
ವಿಶ್ವಾಸ ಟಿ ಸಿ
ನಿರ್ಮಾಪಕರು
ನಯನಾ ವಿಶ್ವಾಸ
ಸ್ಟುಡಿಯೋ
Gosala Guru Media Productions [GGMP] & YDMP
ಹಕ್ಕುಸ್ವಾಮ್ಯ
© ವಿಶ್ವಾಸ ಟಿ ಸಿ
ಜಾಲತಾಣ
gosala.guru
ಸಂಪರ್ಕ
contact@gosala.guru