ಶ್ರೀ ಗೋಸಲ ಚನ್ನಬಸವೇಶ್ವರ – ಆತ್ಮಘೋಷ

ಶ್ರೀ ಗೋಸಲ ಚನ್ನಬಸವೇಶ್ವರ

━ ಆತ್ಮಘೋಷ ━

ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ ಕ್ಷೇತ್ರ -
ಗುಬ್ಬಿ, ತುಮಕೂರು ಜಿಲ್ಲೆ

ಕರುಣಾತ್ಮ ನೀನು; ಗೋಸಲ ಚನ್ನಬಸವೇಶ್ವರ.
ಪರಮಾತ್ಮ ನೀನು; ಗೋಸಲ ಚನ್ನಬಸವೇಶ್ವರ.
ಶಾಶ್ವತ ಆತ್ಮ ನೀನು; ಗೋಸಲ ಚನ್ನಬಸವೇಶ್ವರ.
ಆತ್ಮ ಶ್ವಾಸ ನೀನು; ಆತ್ಮಗುರು ಗೋಸಲೇಶ್ವರ.
ಓಂ ಶ್ರೀ ಗೋಸಲ ಚನ್ನಬಸವೇಶ್ವರ.
ನೀ ನನ್ನ ಆತ್ಮ; ನೀ ನನ್ನ ಆತ್ಮ.
ಕರಗಿಸಲು, ಕುಗ್ಗಿಸಲು, ಕಬಳಿಸಲು — ಆಗದು.
ಬಾಯಾರಿಸಲು, ಹಸಿವಿಸಲು, ದುಃಖಿಸಲು — ಆಗದು.
ಖರೀದಿಸಲು, ಅಳಿಸಲು, ಭಯಗೊಳಿಸಲು — ಆಗದು.
ಆಗದು, ಶಸ್ತ್ರಗಳಿಗೆ ಕೆಡವಲು.
ಆಗದು, ಭೂಮಿಗೆ ಮಣ್ಣಾಗಿಸಲು.
ಆಗದು, ನೀರಿಗೆ ಮುಳುಗಿಸಲು.
ಆಗದು, ಬೆಂಕಿಗೆ ಸುಡಲು.
ಆಗದು, ಗಾಳಿಗೆ ಒಣಗಿಸಲು.
ಆಗದು, ಆಕಾಶಕ್ಕೆ ಬಂಧಿಸಲು.
ಓಂ ಶ್ರೀ ಗೋಸಲ ಚನ್ನಬಸವೇಶ್ವರ.
ನೀ ನನ್ನ ಆತ್ಮ; ನೀ ನನ್ನ ಆತ್ಮ.
ನೀನು ನನ್ನ ಅಂತರಂಗ; ನೀನು ನನ್ನ ಬಹಿರಂಗ.
ನೀನು ನನ್ನ ಆತ್ಮಲಿಂಗ; ನೀನು ನನ್ನ ಆತ್ಮ ತರಂಗ.
ನೀನು ನನ್ನ ಜೀವಚೇತನ, ಆತ್ಮ ಅನಂತ.
ಪ್ರಾಣ ಚೈತನ್ಯ; ಅಂತರಾತ್ಮ, ಆತ್ಮ ಸಂಗಮ.
ನೀನು ನನ್ನ ಆತ್ಮವಾಗಿರಲು, ನೀನು ನನ್ನ ಆತ್ಮದಲ್ಲಿರಲು;
ಮುಕ್ತಿ, ಮೋಕ್ಷ, ವಿಲೀನ, ಸಿದ್ಧಿಯಾಗಿರಲು — ತಪ್ಪಿಸಲಾಗದು; ತಪ್ಪಿಸಲಾಗದು.
ನಿನ್ನಲ್ಲಿ ವಿಲೀನವಾಗಲು ತಪ್ಪಿಸಲಾಗದು.
ಓಂ ಶ್ರೀ ಗೋಸಲ ಚನ್ನಬಸವೇಶ್ವರ.
ನೀ ನನ್ನ ಆತ್ಮ; ನೀ ನನ್ನ ಆತ್ಮ.
ಶ್ರೀ ಗೋಸಲ ಚನ್ನಬಸವೇಶ್ವರ.
ನೀ ನನ್ನ ಆತ್ಮಗುರು; ನೀ ನನ್ನ ಆತ್ಮ.
ನೀ ನನ್ನ ಆತ್ಮೀಯ ಗುರು — ಪರಮಾತ್ಮ.
ನೀ ನನ್ನ ಆತ್ಮ; ನೀ ನನ್ನ ಆತ್ಮ.
ಗುಬ್ಬಿಯಪ್ಪ! ಗುಬ್ಬಿಯಪ್ಪ! ಗುಬ್ಬಿಯಪ್ಪ!
ನೀ ನನ್ನ ಆತ್ಮ, ಗುಬ್ಬಿಯಪ್ಪ; ನೀ ನನ್ನ ಆತ್ಮ.
ಓಂ ಶ್ರೀ ಗೋಸಲ ಚನ್ನಬಸವೇಶ್ವರ.
ನೀ ನನ್ನ ಆತ್ಮ; ನೀ ನನ್ನ ಆತ್ಮ.

ಸಂಗೀತ ವಿವರಗಳು

ಗೀತರಚನೆ ವಿಶ್ವಾಸ್ ತುಮಕೂರು ಚನ್ನಬಸಪ್ಪ
ಸಂಗೀತ ಸಂಯೋಜನೆ, ನಿರ್ದೇಶನ ಮತ್ತು ವ್ಯವಸ್ಥೆ ವಿಶ್ವಾಸ್ ಟಿ ಸಿ
ನಿರ್ಮಾಪಕರು ನಯನಾ ವಿಶ್ವಾಸ್
ಸ್ಟುಡಿಯೋ Gosala Guru Media Productions [GGMP] & YDMP
ಹಕ್ಕುಸ್ವಾಮ್ಯ © ವಿಶ್ವಾಸ್ ಟಿ ಸಿ
ಸಂಪರ್ಕ contact@gosala.guru
error: Content is protected !!