ಓಂ ನಮಃ ಶಿವಾಯ - ವಿಶ್ವಾಸ್ ತುಮಕೂರು ಚನ್ನಬಸಪ್ಪ

ಹರದನಹಳ್ಳಿ ಸಂಜಾತೇಶ್ವರ

━ ಶ್ರೀ ಚನ್ನಬಸವೇಶ್ವರ ಸ್ತೋತ್ರ ಗೀತೆ ━

ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ ಕ್ಷೇತ್ರ -
ಗುಬ್ಬಿ, ತುಮಕೂರು ಜಿಲ್ಲೆ

ಗೋಸಲ ಗುರು | ಗುಬ್ಬಿಯಪ್ಪ | ಗುಬ್ಬಿ ಕ್ಷೇತ್ರ ಪಾಲಕ | ಗುಬ್ಬಿಯ ಒಡೆಯ | ಗೋಸಲಾಧಿಪತಿ

ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ
ಚನ್ನಬಸವ, ಚನ್ನಬಸಪ್ಪ, ಚನ್ನಬಸವರಾಜ,
ಚನ್ನಬಸವೇಶ, ಚನ್ನಬಸವೇಶ, ಚನ್ನಬಸವೇಶ.
ಸೃಷ್ಟಿ ಜನಕನ ವರ ಪ್ರಸಾದ ಶೋಭಿತ,
ಶಿವನ ಸಂಜಾತ ಹರನ ಪೋಷಿತ,
ಹರಿಕುಠಾರ ಹರದನಹಳ್ಳಿ ಸಂಜಾತೇಶ್ವರ,
ಚಾಮರಾಜನಗರ ಕುಮಾರೇಶ್ವರ.
ಓಂ ನಮಃ ಶಿವಾಯ... ಶಿವನೇ ಶ್ವಾಸ,
ಗೋಸಲ ಚನ್ನಬಸವೇಶ ಗುಬ್ಬಿಯ ಶ್ವಾಸ,
ಗೋಸಲ ಚನ್ನಬಸವೇಶ ಗುಬ್ಬಿಯ ಶ್ವಾಸ.
ಜಯ ಜಯ ಚನ್ನಬಸವೇಶ ಗುಬ್ಬಿ ಕ್ಷೇತ್ರವಾಸ,
ಗುಬ್ಬಿ ಕ್ಷೇತ್ರಾತ್ಮದಿ ನೆಲೆಸಿಹ ಈಶ್ವರ,
ಗುಬ್ಬಿಯ ಆತ್ಮ ಆತ್ಮಲಿಂಗೇಶ್ವರ,
ಜನರ ಮನದ ಗುರು ಗೋಸಲೇಶ್ವರ,
ಗೋಸಲ ಗುರು ಶ್ರೀ ಚನ್ನಬಸವೇಶ್ವರ.
ಅನುಗ್ರಹ ಕೋರಿ ಬಂದ ಭಕ್ತ ಮಕ್ಕಳ,
ಕರುಣಾ ಲಹರಿ ನಿನ್ನ ಆಶ್ರಯ ಸುಖ ನಿರಾಳ,
ಸಮಗ್ರ ಭಕ್ತಿ ನಿನ್ನ ಮಾರ್ಗ ಸಭ್ಯ ಸರಳ,
ಸಲ್ಲದು ದುರಾಲೋಚನೇ ದುರ್ಮಾರ್ಗ.
ಶರಣು ಶರಣು ಗೋಸಲ ಗುರು ಶರಣು,
ಹರನ ಚರಣ ಶರಣ ಗೋಸಲ ಗುರು ಶರಣು,
ಜೀವನ ಹಣತೆಯ ಬೆಳಗಿಸೋ ಗೋಸಲ ಗುರು ಶರಣು,
ಭವ ಸಾಗರ ದಾಟಿಸೋ ಗೋಸಲ ಗುರು ಶರಣು.
ಜಯ, ಜಯ, ಜಯ, ಜಯ.
ಜಯ ಜಯ ಸೃಷ್ಟಿಯ ಜನಕ,
ಜಯ ಜಯ ಶಿವನ ಆರಾಧಕ,
ಜಯ ಜಯ ಗುರು ಲಿಂಗ ಸಾಧಕ,
ಜಯ ಜಯ ಶ್ರೀ ಚನ್ನಬಸವೇಶ್ವರ...

ಸಂಗೀತ ವಿವರಗಳು

ಗೀತರಚನೆ ವಿಶ್ವಾಸ್ ತುಮಕೂರು ಚನ್ನಬಸಪ್ಪ
ಸಂಗೀತ ಸಂಯೋಜನೆ, ನಿರ್ದೇಶನ ಮತ್ತು ವ್ಯವಸ್ಥೆ ವಿಶ್ವಾಸ್ ಟಿ ಸಿ
ನಿರ್ಮಾಪಕರು ನಯನಾ ವಿಶ್ವಾಸ್
ಸ್ಟುಡಿಯೋ Gosala Guru Media Productions [GGMP] & YDMP
ಹಕ್ಕುಸ್ವಾಮ್ಯ © ವಿಶ್ವಾಸ್ ಟಿ ಸಿ
ಸಂಪರ್ಕ contact@gosala.guru
error: Content is protected !!