ಗೋಸಲ ಗುರು - ವಿಶ್ವಾಸ್ ತುಮಕೂರು ಚನ್ನಬಸಪ್ಪ

|| ಗೋಸಲ ಗುರು ||

- ಶ್ರೀ ಚನ್ನಬಸವೇಶ್ವರ ಸ್ವಾಮಿ ಭಕ್ತಿಗೀತೆ -

ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ ಕ್ಷೇತ್ರ,
ಗುಬ್ಬಿ, ತುಮಕೂರು ಜಿಲ್ಲೆ

ಗೋಸಲ ಗುರು | ಗುಬ್ಬಿಯಪ್ಪ | ಗುಬ್ಬಿ ಕ್ಷೇತ್ರ ಪಾಲಕ |
ಗುಬ್ಬಿಯ ಒಡೆಯ | ಗೋಸಲಾಧಿಪತಿ

ನೀ ನಮ್ಮ ಮನೆಯ ದೇವರು,
ನನ್ನ ಮನದ, ದೇವಗುರುವು.
ನಾ ಮಾಡುವ ಕಾಯಕದಲ್ಲಿರುವ, ಗೋಸಲ ಗುರು.
ನನ್ನ ಸನ್ಮಾರ್ಗದಲ್ಲಿ, ನಡೆಸೋ ಸದ್ಗುರು.
ನನ್ನ ಕಾಯಕದಲ್ಲಿ, ಇರುವ ಗುರುವು,
ಸನ್ಮಾರ್ಗದಲ್ಲಿ ಎಲ್ಲರನ್ನು ನಡೆಸಿ,
ಸಾಮಾನ್ಯರನ್ನು, ಸುಜನರನ್ನಾಗಿಸಿದ, ಸದ್ಗುರುವು.
ನೀ ನನ್ನ ಸದ್ಗುರು, ಸರ್ವರ, ಸದ್ಗುರು.
ನಿನ್ನ ಆಚಾರ, ನಿನ್ನ, ವಿಚಾರ, ನಿಷ್ಠೆ ನನ್ನಲಿರಲು,
ನಾನು ಮಾಡುವ ಕಾಯಕದಲ್ಲಿರಲು,
ಯಾರೂ ಉಸಿರಿಸರು, ನಿಟ್ಟುಸಿರು, ಬಿಸಿಯುಸಿರು.
ನೀ ನನ್ನ ಸದ್ಗುರು, ಸರ್ವರ ಸದ್ಗುರು,
ನನ್ನ ದೇವಗುರು, ಗೋಸಲ ಗುರು.
ಗೋಸಲ ಗುರು. ಗುಬ್ಬಿಯಪ್ಪ.
ಗೋಸಲ ಗುರು. ಗುಬ್ಬಿಯಪ್ಪ.
ಗೋಸಲ ಗುರು ಶ್ರೀ ಚನ್ನಬಸವೇಶ್ವರ,
ಗುರುವಿನ ಗುರು ಶ್ರೀ ಚನ್ನಬಸವೇಶ್ವರ,
ನೀ ನನ್ನ ಸದ್ಗುರು, ಸರ್ವರ ಸದ್ಗುರು.
ಗೋಸಲ ಗುರು, ನನ್ನ ಸದ್ಗುರು, ಸರ್ವರ ಸದ್ಗುರು.
ಗೋಸಲ ಗುರು, ನನ್ನ ಸದ್ಗುರು, ಸರ್ವರ ಸದ್ಗುರು.
ಗೋಸಲ ಗುರು, ನನ್ನ ಸದ್ಗುರು, ಸರ್ವರ ಸದ್ಗುರು.

ಸಂಗೀತ ವಿವರಗಳು

ಗೀತರಚನೆ ವಿಶ್ವಾಸ್ ತುಮಕೂರು ಚನ್ನಬಸಪ್ಪ
ಸಂಗೀತ ಸಂಯೋಜನೆ, ನಿರ್ದೇಶನ ಮತ್ತು ವ್ಯವಸ್ಥೆ ವಿಶ್ವಾಸ್ ಟಿ ಸಿ
ನಿರ್ಮಾಪಕರು ನಯನಾ ವಿಶ್ವಾಸ್
ಸ್ಟುಡಿಯೋ Gosala Guru Media Productions [GGMP] & YDMP
ಹಕ್ಕುಸ್ವಾಮ್ಯ © ವಿಶ್ವಾಸ್ ಟಿ ಸಿ
ಸಂಪರ್ಕ contact@gosala.guru
error: Content is protected !!