ವಿಶೇಷ ಶ್ವಾಸ - ವಿಶ್ವಾಸ್ ತುಮಕೂರು ಚನ್ನಬಸಪ್ಪ

ವಿಶೇಷ ಶ್ವಾಸ

━ ಗುಬ್ಬಿಯಪ್ಪನ ಶ್ವಾಸ ಭಕ್ತಿ ಗೀತೆ ━

ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ ಕ್ಷೇತ್ರ -
ಗುಬ್ಬಿ, ತುಮಕೂರು ಜಿಲ್ಲೆ

ಗೋಸಲ ಗುರು | ಗುಬ್ಬಿಯಪ್ಪ | ಗುಬ್ಬಿ ಕ್ಷೇತ್ರ ಪಾಲಕ | ಗುಬ್ಬಿಯ ಒಡೆಯ | ಗೋಸಲಾಧಿಪತಿ

ಓಂ, ಶ್ವಾಸ ನೀನು; ಉಚ್ಛ್ವಾಸ ನೀನು; ನಿಶ್ವಾಸ ನೀನು; ವಿಶೇಷ ಶ್ವಾಸ ನೀನು.
ಶ್ವಾಸೋದ್ಭವ ಸುಭಕ್ತಿ ನನ್ನದು.
ಉಚ್ಛ್ವಾಸದಿ ಸ್ಮರಿಸುವೆನು; ನಿಶ್ವಾಸದಿ ಸ್ಮರಿಸುವೆನು.
ಕಣ ಕಣದ ಶ್ವಾಸದಿ ನೀನು — ವಿಶೇಷ ಶ್ವಾಸ ನೀನು.
ಒಳಗಿನ ಹೊರಗಿನ ಕಣ ಕಣದ ಶ್ವಾಸ;
ಹಸಿವು–ತೃಪ್ತಿ, ನೋವು–ನಲಿವಿನ ಶ್ವಾಸ;
ನಿಂದನೆ–ವಂದನೆ, ಉಪೇಕ್ಷೆ–ಅಪೇಕ್ಷೆ ಶ್ವಾಸ;
ದ್ವೇಷ–ಸ್ನೇಹ, ವಿರಕ್ತಿ–ಭಕ್ತಿ, ಪ್ರೀತಿ–ಶ್ವಾಸ — ವಿಶೇಷ ಶ್ವಾಸ ನೀನು.
ಒಳಗಿನ ಹೊರಗಿನ ದುರ್ಗುಣ–ಸುಗುಣ ಶ್ವಾಸದಿ;
ಸುಗಮ–ದುರ್ಗಮ, ದುರ್ಮಾರ್ಗ–ಸನ್ಮಾರ್ಗದಿ;
ಒಳ ಹೊಕ್ಕು ಅರಿವಿನಿಂದ ಹೊರ ಹೊಮ್ಮಿಹೆನು.
ಎಲ್ಲಾ ಶ್ವಾಸದಲ್ಲಿ ಏರಿಳಿತ ಬಾಳಿ ಉಸಿರಿಸಿಹೆನು — ವಿಶೇಷ ಶ್ವಾಸ ನೀನು.
ಜನ್ಮದಿನದ ಆದಿ–ಶ್ವಾಸದಿ ಉದಯಿಸಿದ ಭಕ್ತಿ;
ಸುಜನ್ಮದ ನಿಶ್ವಾಸದಿ ಸಂಪೂರ್ಣ ಸುಭಕ್ತಿ;
ಉಸಿರಿನ ಕಣ ಕಣದಿ ನಿನ್ನಲ್ಲಿ ಸುಪೂರ್ಣ ಆಸಕ್ತಿ;
ಜೀವಪ್ರಾಣ–ಶಿವೈಕ್ಯದ ನಿಶ್ವಾಸದಿ ವಿಪೂರ್ಣ ಮುಕ್ತಿ — ವಿಶೇಷ ಶ್ವಾಸ ನೀನು.
ಗುಬ್ಬಿಯ ಶ್ವಾಸ, ಭಕ್ತ ಮಕ್ಕಳ ಆಶಾ–ಶ್ವಾಸ ನೀನು;
ನಂಬಿ ಆಶ್ರಯ ಅರಸಿದವರ ಶ್ವಾಸ ನೀನು.
ಶಾಶ್ವತನ ಶ್ವಾಸ, ವಿಶೇಷ ಶ್ವಾಸ ನೀನು;
ಉಚ್ಛ್ವಾಸ–ನಿಶ್ವಾಸ, ಈ ವಿಶ್ವಾಸ ನಿನ್ನದು — ವಿಶೇಷ ಶ್ವಾಸ ನೀನು.
ಹರಸಿಹೆ ನೀನು; ಉಸಿರಿಸುವೆನು ನಾನು.
ಚನ್ನಬಸವಾ! ಚನ್ನಬಸವೇಶ! ಚನ್ನಬಸವೇಶ್ವರ!
ಗುಬ್ಬಿಯಪ್ಪ! ಗುಬ್ಬಿಯಪ್ಪ! ಗುಬ್ಬಿಯಪ್ಪ!
ಗುಬ್ಬಿ ಶ್ರೀ ಚನ್ನಬಸವೇಶ್ವರ — ವಿಶೇಷ ಶ್ವಾಸ ನೀನು.
ಗೋಸಲಗುರು ಶ್ರೀ ಚನ್ನಬಸವೇಶ್ವರ — ವಿಶೇಷ ಶ್ವಾಸ ನೀನು.
ಗೋಸಲಗುರು, ಗುಬ್ಬಿಯಪ್ಪ — ವಿಶೇಷ ಶ್ವಾಸ ನೀನು.
ವಿಶೇಷ ಶ್ವಾಸ ನೀನು! ವಿಶೇಷ ಶ್ವಾಸ ನೀನು! ವಿಶೇಷ ಶ್ವಾಸ ನೀನು!

ಸಂಗೀತ ವಿವರಗಳು

ಗೀತರಚನೆ ವಿಶ್ವಾಸ್ ತುಮಕೂರು ಚನ್ನಬಸಪ್ಪ
ಸಂಗೀತ ಸಂಯೋಜನೆ, ನಿರ್ದೇಶನ ಮತ್ತು ವ್ಯವಸ್ಥೆ ವಿಶ್ವಾಸ್ ಟಿ ಸಿ
ನಿರ್ಮಾಪಕರು ನಯನಾ ವಿಶ್ವಾಸ್
ಸ್ಟುಡಿಯೋ Gosala Guru Media Productions [GGMP] & YDMP
ಹಕ್ಕುಸ್ವಾಮ್ಯ © ವಿಶ್ವಾಸ್ ಟಿ ಸಿ
ಸಂಪರ್ಕ contact@gosala.guru
error: Content is protected !!