ನನ್ನ ಮತಿ ನಿನ್ನ ಸ್ತುತಿ - ಚನ್ನಬಸವ ಯತಿ

ನನ್ನ ಮತಿ ನಿನ್ನ ಸ್ತುತಿ

॥ ಚನ್ನಬಸವ ಯತಿ ಭಕ್ತಿಗೀತೆ ॥

ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ ಕ್ಷೇತ್ರ -
ಗುಬ್ಬಿ, ತುಮಕೂರು ಜಿಲ್ಲೆ

ಗೋಸಲ ಗುರು | ಗುಬ್ಬಿಯಪ್ಪ | ಗುಬ್ಬಿ ಕ್ಷೇತ್ರ ಪಾಲಕ | ಗುಬ್ಬಿಯ ಒಡೆಯ | ಗೋಸಲಾಧಿಪತಿ

ನನ್ನ ಮತಿ, ನಿನ್ನ ಸ್ತುತಿ, ಚನ್ನಬಸವ ಯತಿ,
ಚಿತ್ತಚೇತನ, ಸ್ಮರಣೆಗಾನ, ಶಿವತತ್ವ ಮೂರ್ತಿ,
ಶುದ್ಧ ಧರ್ಮ, ಶೂನ್ಯಪೂರ್ಣ, ಗೋಸಲ ವಿರಕ್ತಿ,
ನೀನೆ ಸಿದ್ಧಿ, ಶಕ್ತಿ, ಸ್ಥಿತಿ, ವೃತ್ತಿ, ಧೃತಿ ಶಾಂತಿ,
ಚನ್ನಬಸವ ಯತಿ, ನೀನೆ ನನ್ನ, ಭಕ್ತಿ, ಮುಕ್ತಿ, ವಿಭೂತಿ,
ಶ್ರೀ ಗೋಸಲ ಚನ್ನಬಸವೇಶ್ವರ, ಸದಾ ನಿನ್ನ ನಾಮ ಸ್ಮೃತಿ,
ನಿನ್ನ ಸನ್ಮಾರ್ಗದ ನಡೆಯ ಧ್ವನಿ, "ಮೌನದಲ್ಲಿ ಕೇಳಿಸಿ",
ನೀನೆ "ನಿಜ" ಸ್ವರೂಪಿ, ನೀನೆ "ಗುಣ", ನೀನೆ "ಶಿವ ಯೋಗಿ",
ನಿನ್ನ "ಶಿವವಚನ", ಅಂತರಾಳದ ಅರಿವು, ಉಸಿರು ಸ್ಮೃತಿ,
ಕಾಮ ಕ್ರೋಧ, ಮದ ಮೋಹ, ಲೋಭ ಮಾತ್ಸರ್ಯ, "ಅಹಂ ಭಸ್ಮಮ್",
ಚನ್ನಬಸವ ಯತಿ, ನೀನೆ ನನ್ನ, ಭಕ್ತಿ, ಮುಕ್ತಿ, ವಿಭೂತಿ,
ಶ್ರೀ ಗೋಸಲ ಚನ್ನಬಸವೇಶ್ವರ, ಸದಾ ನಿನ್ನ ನಾಮ ಸ್ಮೃತಿ,
ಸುಶರಣ ಸಂಗ, ನಿರ್ಮಲ ಅಂತರಂಗ, ತತ್ತ್ವ ಬೋಧಿಸಿ,
ಸಮ್-ಯಮ, ಕ್ಷಮಾ ಗುಣ, ಆಂತರ್ಯಶುದ್ಧಿ ಉಪದೇಶಿಸಿ,
ಅರಿವು, ಪಾವನ ಸುಮನ, "ಆಂತರ್ಯಚಕ್ಷು", ಪ್ರಕಾಶಿಸಿ,
ಸತ್ಯ, ನ್ಯಾಯ, ಧರ್ಮ, ನೀತಿ, ಪ್ರೀತಿ, "ಪೋಷಿಸಿ ಘೋಷಿಸಿ",
ಚನ್ನಬಸವ ಯತಿ, ನೀನೆ ನನ್ನ, ಭಕ್ತಿ, ಮುಕ್ತಿ, ವಿಭೂತಿ,
ಶ್ರೀ ಗೋಸಲ ಚನ್ನಬಸವೇಶ್ವರ, ಸದಾ ನಿನ್ನ ನಾಮ ಸ್ಮೃತಿ,
ಗುಬ್ಬಿಯಪ್ಪ, ಗೋಸಲ ಗುರು, ಗೋಸಲಾಧಿಪತಿ, ಚನ್ನಬಸವೇಶ್ವರ,
ಸದಾ ನಿನ್ನ ನಾಮ "ಸ್ತುತಿ",
ಸದಾ ನಿನ್ನ ನಾಮ "ಸ್ಮೃತಿ",
ಸದಾ ನಿನ್ನ ನಾಮ "ಸ್ಮರಣೆ",
ಚನ್ನಬಸವ ಯತಿ, ನೀನೆ ನನ್ನ, ಭಕ್ತಿ, ಮುಕ್ತಿ, ವಿಭೂತಿ.

ಭಕ್ತಿಪೂರ್ವಕ ಸಮರ್ಪಣೆ

ಸಮರ್ಪಿತ ಗೋಸಲ ಗುರು ಸದ್ಭಕ್ತರ ಸಮೂಹ

ಸಂಗೀತ ವಿವರಗಳು

ಗೀತರಚನೆ | ಸಾಹಿತ್ಯಾಭಿಷೇಕ 🖊 ವಿಶ್ವಾಸ್ ತುಮಕೂರು ಚನ್ನಬಸಪ್ಪ
ಗುರುತ್ವ ವೀರಶೈವ ಲಿಂಗಾಯತ ಜಂಗಮ ಶರಣ ಸಾಹಿತಿ ಮತ್ತು ಕನ್ನಡ ಸಾಹಿತಿ
ಸಂಗೀತ ಸಂಯೋಜನೆ, ನಿರ್ದೇಶನ ಮತ್ತು ವ್ಯವಸ್ಥೆ ವಿಶ್ವಾಸ್ ಟಿ ಸಿ
ನಿರ್ಮಾಪಕರು ನಯನಾ ವಿಶ್ವಾಸ್
ಸ್ಟುಡಿಯೋ Gosala Guru Media Productions [GGMP] & YDMP
ಹಕ್ಕುಸ್ವಾಮ್ಯ © ವಿಶ್ವಾಸ್ ಟಿ ಸಿ
ಜಾಲತಾಣ gosala.guru
ಸಂಪರ್ಕ contact@gosala.guru
error: Content is protected !!